ಆಕ್ಸಾಲಿಸ್e

ಆಕ್ಸಾಲಿಸ್e
ಆಕ್ಸಾಲಿಸ್ ಜಾತಿಯ ಸಸ್ಯಗಳು ತೋಟಗಳಲ್ಲಿನ ಬಹು ವಾರ್ಷಿಕ ಕಳೇಗಿಡಗಳು. ಹೂವಿನ ಅಲಂಕಾರಕ್ಕಾಗಿ ಉದ್ಯಾನಗಳಲ್ಲಿ ಮನೆಗಳಲ್ಲಿ ಬೆಳೆಸುತ್ತಾರೆ. ಎಳೆಯ ಗಿಡವನ್ನು ತರಕಾರಿಯಾಗೂ ಸ್ಥಾನೀಯ ಔಷಧವಾಗೂ ಬಳಸುತ್ತಾರೆ. ಇವುಗಳಲ್ಲಿ 500 ಪ್ರಭೇದಗಳಿವೆ. ಕೆಲವಕ್ಕೆ ಕಾಂಡವಿರುವುದಿಲ್ಲ. ಕೆಲವು ಬಳ್ಳಿಗಳಂತೆ ಬೆಳೆಯುತ್ತವೆ. ಎಲೆ ಪರ್ಯಾಯ ಕ್ರಮದಲ್ಲಿ ಜೋಡಣೆಗೊಂಡಿವೆ. ಬೆಳಕಿಲ್ಲದಲ್ಲಿ ಎಲೆಗಳು ಮಡಿಚಿಕೊಳ್ಳುತ್ತವೆ. ಹೂ ಅಂಬೆಲ್ ಮಾದರಿಯದು. ವಿವಿಧ ಬಣ್ಣಗಳಲ್ಲಿವೆ. ದ್ವಿಲಿಂಗ ಜಾತಿಯವು. 5 ಪುಷ್ಪ ಪತ್ರಗಳೂ 5 ದಳಗಳೂ 5 ಭಾಗದ ಅಂಡಾಶಯವೂ ಇವೆ. ಫಲ ಕ್ಯಾಪ್ಸೂಲ್ ಮಾದರಿಯದು.

	ಆಕ್ಸಾಲಿಸ್ ಬೊವೈ, ವೈರಿಯಬಿಲಿಸ್, ಸರ್ನುವ, ಕುಪ್ರಿಯ ಫ್ಲೋರಿಬಂಡ, ಟೆಟ್ರಫಿಲ ಇವು ಹೆಚ್ಚು ಬಳಕೆಯಲ್ಲಿರುವ ಪ್ರಭೇದಗಳು. 

	ಲಶುನಗಳಿಂದ, ಬೀಜಗಳಿಂದ ಸಸ್ಯವೃದ್ಧಿ ಮಾಡಬಹುದು. ಮಳೆಗಾಲದಲ್ಲಿ ಸಸಿ ಬೇಗ ಏಳುತ್ತದೆ. ಇವಕ್ಕೆ ತೇವಾಂಶ ಬೇಕು. ಜೌಗು ಆಗದು. ತಂಪುಕಾಲದಲ್ಲಿ ಹೂ ಬಿಡುತ್ತವೆ.    							
(ಡಿ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ